ವೆಬ್ಡಿಸೈನಿಂಗ್ ಒಂದು ರೀತಿಯ ಚಿತ್ರಕಲೆ. ಕಾಗದ, ಬಣ್ಣ
ಬದಲು ವೆಬ್ ಪ್ರೊಗ್ರಾಮಿಂಗ್ ಭಾಷೆಗಳನ್ನು ಬಳಸುತ್ತೇವೆ. ಅಂತರ್ಜಾಲ ತಾಣ
(ವೆಬ್ಸೈಟ್) ಸರಳ ಹೆಚ್.ಟಿ.ಎಂ.ಎಲ್ ಅಥವಾ ಜಾವ, ಸಿ.ಎಸ್.ಎಸ್, ಫ್ಲಾಶ್
ಮುಂತಾದವುಗಳನ್ನು ಒಳಗೊಂಡಿದ್ದಾಗಿರಲಿ, ಅದು ಬೇಕಿರುವ ಎಲ್ಲಾ ಸೌಲಭ್ಯಗಳನ್ನು
ಪೂರೈಸಿ ನೋಡಲು ಅಂದವಗಿರುವಂತೆ ಮಾಡುವುದು ಮೂಲ ಉದ್ದೇಶ.
ತಾಣಗಳ ರಚನೆ ಮತ್ತು ಅಂತರ್ಜಾಲ
ವ್ಯವಹಾರಕ್ಕೆ ಬೇಕಾಗುವ ಅನೇಕ ಸೌಲಭ್ಯಗಳು ಹಾಗು ಕೆಳಗೆ ನೀಡಿರುವ
ಪಟ್ಟಿಯಲ್ಲಿರುವುದನ್ನು ಸ್ವತಂತ್ರ ವೃತ್ತಿಯಾಗಿ
ಮಾಡುತ್ತಿದ್ದೇನೆ.
ನಿಮ್ಮ
ಸಂಸ್ಥೆ, ವಯಕ್ತಿಕ ಬಳಕೆ, ಸಣ್ಣ ವ್ಯವಹಾರ ಮುಂತಾದವುಗಳಿಗೆ ಅನೇಕ ಸೌಲಭ್ಯಗಳಿರುವ
ಅಂತರ್ಜಾಲ ತಾಣಗಳನ್ನು ಬಹಳ ಕಡಿಮೆ ವೆಚ್ಚದಲ್ಲಿ ಮಾಡಿಕೊಡಬಲ್ಲೆ.
ನಾನು ನಿರ್ಮಿಸಿರುವ ಟ್ಯಾಬ್ ಹಾಗು ಅಂತರ್ಜಾಲ ಪುಟಗಳ ಹಲವು ಸ್ಕ್ರೀನ್ಷಾಟ್ ಚಿತ್ರಗಳು ಕೆಳಗಿವೆ, ಒಮ್ಮೆ ನೋಡಿರಿ.
ನೀವು ಯಾವುದಾದರು ನಿರ್ಲಾಭ ಸಾಮಾಜಿಕ ಸಂಘ ಸಂಸ್ಥೆ / ಯೋಜನೆ ಹಾಗು ಮುಕ್ತ ಬಳಕೆ ತಂತ್ರಾಂಶ ಬಗೆಗಿನ ಯೋಜನೆ ನಡೆಸುತ್ತಿದ್ದಲ್ಲಿ, ಅದರಲ್ಲಿ ಭಾಗಿಯಾಗಿ ಅದಕ್ಕಾಗಿ ಮೇಲೆ ಪಟ್ಟಿಯಲ್ಲಿರುವ ಸೇವೆಗಳನ್ನು ಉಚಿತವಾಗಿ ಮಾಡಿಕೊಡಲು ಇಚ್ಚಿಸುತ್ತೇನೆ.