"ಕನ್ನಡ ಗೆಳೆಯರ ಬಳಗ
ಫೌಂಡೆಶನ್" ಎಂಬ ನಿರ್ಲಾಭ ಸಂಸ್ಥೆಯು ಮಾಹಿತಿ ತಂತ್ರಜ್ಞಾನ
ಕ್ಷೇತ್ರದಲ್ಲಿ ಕನ್ನಡ ಭಾಷೆಯ ಸದ್ಬಳಕೆಯಾಗುವುದರ ಬಗ್ಗೆ ಅರಿವು ಮೂಡಿಸಲು
ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳು ಕಾರ್ಯರೂಪದಲ್ಲಿದೆ.
ಅದಲ್ಲದೆ ನಮ್ಮ ಕನ್ನಡದ ಸಂಸ್ಕೃತಿ ಮತ್ತು ಪರಂಪರೆಯನ್ನು ದಿನನಿತ್ಯ ಜೀವನದಲ್ಲಿಯೂ
ಎತ್ತಿಹಿಡಿಯಲು ಬಳಗವು ಶ್ರಮಿಸುತ್ತಿದೆ.
ಫೇಸ್ಬುಕ್ ತಾಣದಲ್ಲಿ "ಫೇಸ್ಬುಕ್ ಕನ್ನಡ ಗೆಳೆಯರ ಬಳಗ" ಎಂಬ
ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ನೀವು ಬಳಗದ ಯೋಜನೆಗಳ ಭಾಗಿಯಾಗಲು
ನಮ್ಮ 'ಗುಂಪಿಗೆ' ಸೇರಿ,
'ಪುಟವನ್ನು' ಲೈಕ್ ಮಾಡಿ ಹಾಗು 'ಟ್ವಿಟರ್ನಲ್ಲಿ' ಫಾಲೋ ಮಾಡಿರಿ.